ಇಂಡಿಯನ್ ಫಿಲಮ್ಮಿನ ರೂಪಾಂತರ
ಇಂಡಿಯನ್ ಫಿಲಮ್ಮು, ಅದು ಬಾಲಿವುಡ್ ಆಗಿರಲಿ, ಕೋಳಿ ವುಡ್ ಆಗಿರಲಿ ಅಥವಾ ಸ್ಯಾಂಡಲ್ ವುಡ್ ಡೇ ಆಗಿರಲಿ, ಇವರ ವಿಶೇಷ ಅಂದರೆ ಯಾವುದನ್ನೂ ಸೀದಾ ತೋರಿಸದೆ ಇರೋದು. ಯಾಕೆಂದರೆ ಸೀದಾ ತೋರಿಸಿದರೆ ಸೆನ್ಸಾರ್ ಕಟ್ ಮಾಡುತ್ತೆ. ಅದಕ್ಕಾಗೆ ಎಲ್ಲ ಸುತ್ತಿ ಬಳಸು.
ಇಂಡಿಯನ್ ಫಿಲಮ್ಮಿನಲ್ಲಿ ಕಿಸ್ಸಿಂಗ್ ತೋರಿಸೊಲ್ಲ ಆದರೆ ಬದ್ಲು ಎರಡು ಹೂವು ತೋರಿಸ್ತಾರೆ. ಕೇಯೋದು ತೋರಿಸೊಲ್ಲ ಅದರ ಬದಲು ಗಾಳಿ ಬೀಸೋದೋ, ಸಮುದ್ರದ ತೆರೆನೋ ತೋರಿಸ್ತಾರೆ. ಹಾಡಿನ ಮೂಲಕ ಗಂಡು ಹೆಣ್ಣು ಒಟ್ಟಾಗೋದನ್ನ ತೋರಿಸ್ತಾರೆ. ಮಳೇಲಿ ನೆನಸಿ ದೇಹದ ಭಾಗಗಳನ್ನ ಊಹೆಗೆ ಬಿಡ್ತಾರೆ. ಸೆರೆಗಿನ ಮರೆಯ ಚೆಲುವೆ ಅಂದ ಅದಕ್ಕೆ ಮಸಾಲೆ ಬೇರೆ ಸೇರಿಸ್ತಾರೆ. ಈ ಬುದ್ಧಿವಂತಿಕೆನಿಂದಲೇ ಇನ್ನೂ ಬದುಕಿದ್ದಾರೆ. ಇಲ್ದಿದ್ದರೆ ಸೆನ್ಸಾರ್ ನ ಕಪಿ ಮುಷ್ಠಿಯಿಂದ ಬದುಕೋಕೆ ಸಾದ್ಯ ಇರ್ತಿರ್ಲಿಲ್ಲ.
|