hotaks444
New member
- Joined
- Nov 15, 2016
- Messages
- 54,392
ಟೀವಿ ಸೀರಿಯಲ್ ನಟಿಯರು ಮೊದಲ ಬಾರಿಗೆ ನಮ್ಮ ಬೆಡ್ ರೂಂ ಗೆ ಬಂದವರು. ಅಂದರೆ ಇವರು ನಮ್ಮ ಮನೆಯ ಹೆಂಗಸರಿಗೆ ಬಹಳ ಇಷ್ಟವಾಗಿ ಗಂಡನ ಬರವನ್ನು ಮರೆತು ಮನೆಯ ಹೆಂಗಸರು ಈ ಸೀರಿಯಲ್ ಗಳನ್ನ ನೋಡೋಕೆ ಶುರು ಮಾಡಿ ಬೆಡ್ ರೂಂ ನ ಟೀವಿಗೆ ತಮ್ಮನ್ನು ಅರ್ಪಿಸಿ ಕೊಂಡು ಬಿಟ್ಟರು.ಈ ಟೀವಿ ನಟಿಯರು ನಮ್ಮ ಮನೆಯ ಹೆಂಗಸರ ಮೇಲೆ ಮಾಡಿದ ಮೋಡಿ "ಕಹಾನಿ ಘರ್ ಘರ್ ಕಿ" ಮತ್ತು "ಸಾಸ್ ಭಿ ಕಭಿ ಬಹೂ ತಿ"ಗಳು ಸತತವಾಗಿ ಐದು ಆರು ವರ್ಷ ನಡೆಯುವಷ್ಟು. ನೋಡಿದ್ದನ್ನೇ ನೋಡುತ್ತಿದ್ದರೂ, ಅದೇ ಕಣ್ಣೀರಿನ ಕಥೆಯಾಗಿದ್ದರೂ, ಪ್ರತಿ 10 ಸೀರಿಯಲ್ ಗಳಲ್ಲಿ ಗಂಡ ಬದಲಾದರೂ ಈ ಸೀರಿಯಲ್ ನ ಜನಪ್ರಿಯತೆ ಕುಗ್ಗಲಿಲ್ಲ. ಪ್ರಾಯಶಃ ಗಂಡ ಬದಲಾಗಿದ್ದೇ ಈ ಜನಪ್ರಿಯತೆ ಗೆ ಕಾರಣವೇ? ತಮ್ಮ ಗಂಡನನ್ನ ಬದಲಾಯಿಸಕ್ಕಾಗದಿದ್ದರೂ ಬದಲಾಗುವ ಗಂಡನ್ನ ನೋಡೋ ಖುಷೀನೆ ನಮ್ಮ ಹೆಂಗಸರಿಗೆ?
ಈ ಟೀವಿ ಸೀರಿಯಲ್ ನಟಿಯರು ಬದಲಾಗದೆ ಅವರ ಸುತ್ತ ಮುತ್ತಲ ಪರಿಸರ ಬದಲಾಗುತ್ತ ದಿನಕ್ಕೊಂದು ಸೀರೆ, ದಿನಕ್ಕೊಂದು ಆಭರಣದಿಂದ ಕಂಗೊಳಿಸುತ್ತ ನಮ್ಮ ಮನೆಯ ಹೆಂಗಸರನ್ನ ಖುಷಿ ಪಡಿಸುತ್ತಿದ್ದಾರೋ ಅಥವಾ ಹೊಟ್ಟೆ ಕಿಚ್ಚಿನಿಂದ ಉರಿಯುವಂತೆ ಮಾಡುತ್ತಿದ್ದಾರೋ ಗೊತ್ತಾಗದಿದ್ದರೂ, ಈ ಸೀರೆ, ಆಭರಣಗಳನ್ನ ಪುನಃ ಪುನಃ ನೋಡುವ ಅವರ ಆಸೆಯಂತೂ ಈ ಸೀರಿಯಲ್ ಗಳು ಮುಂದುವರಿಯುವಂತೆ ಮಾಡುತ್ತಿದೆ.
ಈ ಸೀರಿಯಲ್ ನಟಿಯರು ಸೀರಿಯಲ್ ಅಲ್ಲದೆ ಕೆಲವೊಂದು ಜಾಹೀರಾತನಲ್ಲೂ ಕಾಣತೊಡಗಿ ತಮ್ಮ ಬೇಳೆ ಬೇಯಿಸಿ ಕೊಳ್ಳುವುದಲ್ಲದೆ ಹೆಚ್ಚು ಹೆಚ್ಚು ಪ್ರಸಿಧ್ಧರಾಗುತ್ತಾ ಹೋಗುವುದು ನೋಡುವುದಕ್ಕೆ ಸಂತೋಷ ಕೊಡುತ್ತದೆ. ಆದರೆ ಈ ಸೀರಿಯಲ್ ನಡೆಯುವಾಗ ಮನೆಗೆ ಬರುವ ಗಂಡಸರಿಗೆ ಮೂರು ಕಾಸಿನ ಬೆಲೆಯೂ ಸಿಗದೆ, ತಮ್ಮ ಊಟವನ್ನ ತಾವೇ ಬಿಸಿ ಮಾಡಿ ತಾವೇ ಉಣ್ಣುವ ಸ್ಥಿತಿ ಬಂದಿರುವುದು ಈ ಸೀರಿಯಲ್ ನಟಿಯರಿಂದ. ಇವರನ್ನು ನಮ್ಮಂತ ಗಂಡಸರು ದ್ವೇಷಿಸುವುದು ಸಹಜವಲ್ಲವೇ?